ಭಾರತದಂತಹ ರಾಷ್ಟ್ರಗಳಲ್ಲಿ ಶ್ರೀಮಂತಿಕೆಯೇನೆಂಬುದು ಒಂದು ವರ್ಗಕ್ಕೆ ಸೀಮಿತವಾದಂತಹ ಸನ್ನಿವೇಶದಲ್ಲಿ ನಿಂತು ಇದಕ್ಕೆ ಕಾರಣವೇನಿರಬಹುದೆಂದು ಅವಲೋಕಿಸಿ ನೋಡಿದರೆ, ಹಣ ಸಂಪಾದನೆಯ ಬಗ್ಗೆಯಾಗಲೀ, ಮಾರಾಟದ ಬಗ್ಗೆಯಾಗಲೀ ನಮಗೆ ಯಾವುದೇ ಸಾಂಪ್ರದಾಯಿಕ ಅಥವಾ ಅಸಂಪ್ರಯಾಯಿಕ ಶಿಕ್ಷಣವಿರಲಿಲ್ಲ ಎಂಬುದು ಅರಿವಿಗೆ ಬರುತ್ತದೆ. ಸೇವಾ ಮನೋಭಾವದಿಂದಲೇ ಬದುಕಲು ಕಲಿತ ನಾವು ಹಣ ಸಂಪಾದನೆಗಿಂತ ಹೆಚ್ಚಾಗಿ ದೈಹಿಕ ಶ್ರಮದಿಂದ ದುಡಿದುಂಡು ಸಂತೃಪ್ತಿಯ ಜೀವನ ನಡೆಸುವ ಕಡೆಗೇ ಹೆಚ್ಚು ಗಮನ ಹರಿಸಿದ್ದೇವೆ. . ಹಾಗಾಗಿಯೇ ವ್ಯಾಪಾರ, ಸೇವೆಯ ಜೊತೆಗೆ ಮಾರಾಟ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವವರು ಇಲ್ಲಿ ಶ್ರೀಮಂತರು. ಅಮೆರಿಕದವರಂತೂ ಈ ವಿಷಯದಲ್ಲಿ ತುಂಬಾ ನಿಪುಣರು. ಇಂಟರ್ನೆಟ್ ತಂತ್ರಜ್ಞಾನದಿಂದ ಇಂದು ಅವರು ಇಡೀ ವಿಶ್ವಕ್ಕೆ ವ್ಯಾಪಿಸಿಕೊಂಡಿದ್ದಾರೆ. ಯಶಸ್ಸು, ಹಣ ಸಂಪಾದನೆ, ಸಿರಿವಂತಿಕೆ ಎಲ್ಲವೂ ಮನುಷ್ಯನ ಮನಸ್ಥಿತಿ, ಮನೋಧರ್ಮ, ದೃಷಿಕೋನದ ಮೇಲೆ ನಿಂತಿದೆ. ಈ ಕಿರು ಪುಸ್ತಕ ಕನ್ನಡಿಗರೂ ಯಶಸ್ಸು, ಹಣ ಸಂಪಾದನೆ, ಸಿರಿವತಿಕೆಗೆ ಗಳಿಸಲು ಪೂರಕವಾಗಿ ಸಿದ್ಧಗೊಳ್ಳಲು ಸಹಾಯ ಮಾಡುತ್ತದೆ. ಯಶಸ್ಸು ಯಾರೊಬ್ಬರ ಸ್ವತ್ತೂ ಅಲ್ಲಾ ಮತ್ತು ಅಸಾಧ್ಯವೂ ಅಲ್ಲ. ಓದಿ, ಅಳವಡಿಸಿಕೊಳ್ಳಿ.
ಹೊಸ ಬದಲಾವಣೆಯ ನವ ಜೀವನ ನಿಮ್ಮದಾಗಲಿ.
This could change your life forever... Kannada Micro book series is one of it's kind of effort to come up with one micro book a week to consume easily in this busy schedule. It takes 1 minute per page to read while traveling, short leisures.